ಬಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿನ ಕಂಡ್ರೆ
ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕೊಂಡ ಬಂದ್ರೆ
ಬಾರಿ ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿನ ಕಂಡ್ರೆ
ಒಂದು ಚೂರು ಬೈಯುದಿಲ್ಲ ರಾತ್ರಿ ಕುಡ್ಕೊಂಡ ಬಂದ್ರೆ
ಟಿವಿ ರೇಡಿಯೋ ಎಂಥ ಬ್ಯಾಡ ಅವ್ಳು ಮನೆಗಿದ್ರೆ
ಅವ್ಳು ಉಂಠೇ ಇಲ್ಲ ಕಾಣಿ ನಾನು ಊಟ ಮಾಡದೇ
ನನ್ನ ಕಿಂಥಾ ಚೂರು ದಪ್ಪಾ ಆದ್ರೂ ನಂಗೆ ಅಡ್ಡಿಲ್ಲೆ
ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವ್ಳು ಸೀರಿ ಉಟ್ಕೊಂಡಬಂದ ಎದ್ರಿಗ ನಿಂತ ಕುಡ್ಲೆ
ಮನ್ಸು ಹೇಳುತ್ತ್ತೊಂದ ಮಾತು
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ನನ್ನಂಥ ಗಂಡನಿಗೆ ಅವಳೇ ಆಸ್ತಿ
ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈ ಹೆಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ ಹೆಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯೋ ಮಾತು
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಊರಮಾತು ಕೇಳಿಕೆಟ್ಟು ಬದುಕು ದೊಂಬರಾಟ ಆದ್ರೂ
ಸಾಯೋತನಕ ಹೆಗಲ ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿ ಕಂಡ
ಮನ್ಸು ಹೇಳುತ್ತ್ತೊಂದ ಮಾತು
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ನನ್ನಂಥ ಗಂಡನಿಗೆ ಅವಳೇ ಆಸ್ತಿ
ಬಾರಿ ಖುಷಿ ಮರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪ ಆತ ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆದ್ರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತು ಕೆಂಬೊ ಗಂಡು ಸಿಕ್ರೆ ಸಾಕಲ್ಲೇ
ಅವ್ರು ಪಂಚು ಎತ್ತಿ ಕಟ್ಟಿ ಕಣ್ಣು ಹೊಡೆದ ಕುಡ್ಲೆ
ಮನ್ಸು ಹೇಳುತ್ತ್ತೊಂದ ಮಾತು
ಚಂದ ಚಂದ ಚಂದ ಚಂದ ನನ್ನ ಗಂಡ
ಕಣ್ಣಿನಲ್ಲೇ ಸನ್ನಿ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ನ ಗಂಡ
ಬೈದ್ರೂನೂ ಮತ್ತೆ ನನ್ನ ಒಪ್ಪಿಕೊಂಡ